ಪರಿಸರ ರಕ್ಷಕರೇ ಭಕ್ಷಕರಾದರೇ?: ಕುಶಾಲನಗರ ಅಂಚೆ ಕಚೇರಿಯಲ್ಲಿ ೭ ಬೃಹತ್ ಮರಗಳ ಮಾರಣಹೋಮ
Latest ಸುದ್ದಿ- Est 0 min
- 0 Views
- 4 days ago
ಬೆಳೆ ವಿಮೆಯಲ್ಲಿ ತೀರ್ಥಹಳ್ಳಿ ರೈತರಿಗೆ ಅನ್ಯಾಯ ಆರೋಪ: ಕುಪ್ಪಳ್ಳಿ ಪ್ರಶಾಂತ್ ಅಸಮಾಧಾನ
Latest Popular ಸುದ್ದಿ- Est 0 min
- 0 Views
- 4 days ago
ತೀರ್ಥಹಳ್ಳಿ :ತುಂಗಾ ನದಿಯಲ್ಲಿ ನೀರುಪಾಲಾಗಿದ್ದ ಇಬ್ಬರು ಯುವಕರ ಮೃ** ಪತ್ತೆ!
Latest Trending ಸುದ್ದಿ- Est 0 min
- 0 Views
- 5 days ago
Top 10 News
ರಾಷ್ಟ್ರಮಟ್ಟಕ್ಕೆ ವಾಗ್ದೇವಿಯ ಮತ್ತೊಂದು ಕ್ರೀಡಾ ಪ್ರತಿಭೆ ದೀಕ್ಷಾ ಎನ್.!
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಹಬ್ಬದ ದಿನವೂ ರಜೆ ಇಲ್ಲವೇ?
ತೀರ್ಥಹಳ್ಳಿ ಸಮೀಪ ವಾಹನ ಡಿಕ್ಕಿ: ಎರಡು ವರ್ಷದ ಚಿರತೆ ಮರಿ ಸಾ*!
ಪರಿಸರ ರಕ್ಷಕರೇ ಭಕ್ಷಕರಾದರೇ?: ಕುಶಾಲನಗರ ಅಂಚೆ ಕಚೇರಿಯಲ್ಲಿ ೭ ಬೃಹತ್ ಮರಗಳ ಮಾರಣಹೋಮ
ಬೆಳೆ ವಿಮೆಯಲ್ಲಿ ತೀರ್ಥಹಳ್ಳಿ ರೈತರಿಗೆ ಅನ್ಯಾಯ ಆರೋಪ: ಕುಪ್ಪಳ್ಳಿ ಪ್ರಶಾಂತ್ ಅಸಮಾಧಾನ
ತೀರ್ಥಹಳ್ಳಿ :ತುಂಗಾ ನದಿಯಲ್ಲಿ ನೀರುಪಾಲಾಗಿದ್ದ ಇಬ್ಬರು ಯುವಕರ ಮೃ** ಪತ್ತೆ!
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ!
ತೀರ್ಥಹಳ್ಳಿ: ಜೆಜೆಎಂ ನಾಮಫಲಕ ಕಾಮಗಾರಿ ಕಳಪೆ ಆರೋಪ!
ತೀರ್ಥಹಳ್ಳಿ: ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಮಿಥಾಲಿ ಟಿ.ಎಸ್. ಅವರು ಗುಂಡು ಎಸೆತ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ನವೆಂಬರ್ 2, 2026ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ 17 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಮಿಥಾಲಿ ಟಿ.ಎಸ್. ಅವರು ಗುಂಡನ್ನು 12.05 ಮೀಟರ್ ದೂರ ಎಸೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Sport
News
ರಾಷ್ಟ್ರಮಟ್ಟಕ್ಕೆ ವಾಗ್ದೇವಿಯ ಮತ್ತೊಂದು ಕ್ರೀಡಾ ಪ್ರತಿಭೆ ದೀಕ್ಷಾ ಎನ್.!
Popular Sport ಸುದ್ದಿ- Est 1 min
- 0 Views
- 9 hours ago
Recent
Posts
ರಾಷ್ಟ್ರಮಟ್ಟಕ್ಕೆ ವಾಗ್ದೇವಿಯ ಮತ್ತೊಂದು ಕ್ರೀಡಾ ಪ್ರತಿಭೆ ದೀಕ್ಷಾ ಎನ್.!
ತೀರ್ಥಹಳ್ಳಿ : ಬೆಂಗಳೂರಿನ ಸರ್ಜಾಪುರದಲ್ಲಿ ನವೆಂಬರ್ 1 ಮತ್ತು 2ರಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ವತಿಯಿಂದ ಆಯೋಜಿಸಲಾಗಿದ್ದ 19 ವರ್ಷದೊಳಗಿನ ಬಾಲಕ-ಬಾಲಕಿಯರ ರಾಜ್ಯಮಟ್ಟದ ಖೋ-ಖೋ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನ ನೀಡಿದ ವಾಗ್ದೇವಿ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ಎನ್. ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.ಸೊರಬದ ಶ್ರೀಮತಿ ಜಯಮ್ಮ ಹಾಗೂ ಶ್ರೀ ನರೇಂದ್ರ ನಾಯಕ್ ದಂಪತಿಯ ಪುತ್ರಿಯಾದ ದೀಕ್ಷಾ ಶೈಕ್ಷಣಿಕವಾಗಿಯೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ.
ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸುವ ಕ್ರೀಡಾಕೂಟಗಳಲ್ಲಿ ಮಾತ್ರವಲ್ಲದೆ, ದಸರಾ ಕ್ರೀಡಾಕೂಟ ಹಾಗೂ ವಿವಿಧ ಮುಕ್ತ ಪಂದ್ಯಾವಳಿಗಳಲ್ಲಿಯೂ ಭಾಗವಹಿಸಿ ಹಲವಾರು ವೈಯಕ್ತಿಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಈ ಮೂಲಕ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕು ಹಾಗೂ ತಾನು ವ್ಯಾಸಂಗ ಮಾಡುತ್ತಿರುವ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.ವಿದ್ಯಾರ್ಥಿನಿಯ ಈ ಸಾಧನೆಗೆ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕ ವೃಂದ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದು, ಮುಂಬರುವ ರಾಷ್ಟ್ರಮಟ್ಟದ ಖೋ-ಖೋ ಸ್ಪರ್ಧೆಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆಲ್ಲುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಹಬ್ಬದ ದಿನವೂ ರಜೆ ಇಲ್ಲವೇ?
ತೀರ್ಥಹಳ್ಳಿ : ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಹಬ್ಬದ ದಿನಗಳಲ್ಲಿಯೂ ರಜೆ ನೀಡದೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿರುವ ಸರ್ಕಾರದ ಕ್ರಮಕ್ಕೆ ಮಂಜುನಾಥ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿಗಳನ್ನು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮುಚ್ಚುವಂತಿಲ್ಲ. ಈ ಅವಧಿಯಲ್ಲಿ ಪೋಷಣ್ ಟ್ರ್ಯಾಕರ್ನಲ್ಲಿ ಅಗತ್ಯ ಮಾಹಿತಿಗಳನ್ನು ಅಪ್ಡೇಟ್ ಮಾಡಬೇಕು. ಕಾರ್ಯಕರ್ತೆ ಹಾಗೂ ಸಹಾಯಕಿಯರು ಮೇಲ್ವಿಚಾರಕರ ಗಮನಕ್ಕೆ ತಂದು, ಒಬ್ಬರು ರಜೆ ಪಡೆದು ಮತ್ತೊಬ್ಬರು ಕರ್ತವ್ಯ ನಿರ್ವಹಿಸುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಂಗನವಾಡಿಗಳನ್ನು ಮುಚ್ಚಲು ಅವಕಾಶವಿಲ್ಲ ಎಂದು ಸೂಚಿಸಲಾಗಿದೆ. ಮೇಲ್ವಿಚಾರಕಿಯರು ಹಾಗೂ ಸಿ ಡಿ ಪಿ ಓ ಖುದ್ದಾಗಿ ಅಂಗನವಾಡಿಗಳಿಗೆ ಭೇಟಿ ನೀಡಲಿದ್ದೇವೆ ಎಂಬ ಸೂಚನೆ ನೀಡಲಾಗಿದೆ.ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೂ ಕುಟುಂಬವಿದೆ. ಅವರಿಗೂ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸುವ ಆಸೆ ಇರುತ್ತದೆ. ಹೀಗಿರುವಾಗ ಹಬ್ಬದ ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುವುದು ಸರಿಯಲ್ಲ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಹಬ್ಬದ ದಿನ ರಜೆ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಮಂಜುನಾಥ್ ಶೆಟ್ಟಿ ಮನವಿ ಮಾಡಿದ್ದಾರೆ
.
ತೀರ್ಥಹಳ್ಳಿ ಸಮೀಪ ವಾಹನ ಡಿಕ್ಕಿ: ಎರಡು ವರ್ಷದ ಚಿರತೆ ಮರಿ ಸಾ*!
ತೀರ್ಥಹಳ್ಳಿ: ಪಟ್ಟಣದ ಸಮೀಪದ ಬುಕ್ಲಾಪುರದ ಕೌರಿ ಬೈಲ್ನಲ್ಲಿ ವಾಹನ ಡಿಕ್ಕಿಯಾಗಿ ಸುಮಾರು ಎರಡು ವರ್ಷ ಪ್ರಾಯದ ಚಿರತೆ ಮರಿ ಮೃ*ಪಟ್ಟಿದೆ.ನವೆಂಬರ್ 6ರ ರಾತ್ರಿ ಚಿರತೆ ಮರಿ ರಸ್ತೆ ದಾಟುವ ಸಂದರ್ಭದಲ್ಲಿ ವೇಗವಾಗಿ ಬಂದ ವಾಹನ ಅಪ್ಪಳಿಸಿದ್ದು, ತೀವ್ರ ಗಾಯಗೊಂಡ ಚಿರತೆ ಸ್ಥಳದಲ್ಲೇ ಮೃ*ಪಟ್ಟಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ವಿದ್ಯುತ್ ಶಾಕ್ಗೆ ಕಾಡಾನೆ ಬಲಿ!
ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ಲೈನ್ ಅಳವಡಿಕೆ; ಹಾಯ್ ಹೊಳೆ ಸಮೀಪದ ಈಚಲವಾಡಿ ಗ್ರಾಮದಲ್ಲಿ ಘಟನೆ.ಶಿವಮೊಗ್ಗ: ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ತಗುಲಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ಹಾಯ್ ಹೊಳೆ ಸಮೀಪದ ಈಚಲವಾಡಿ ಗ್ರಾಮದಲ್ಲಿ ನಡೆದಿದೆ.ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ಲೈನ್ ಅಳವಡಿಸಿದ್ದ ಪರಿಣಾಮ ಕಾಡಾನೆ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿದೆ ಎನ್ನಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಅಳವಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

