ಹಣಗೆರೆ ಸಿರಿಗೆರೆಯಲ್ಲಿ ಅನಾಮಧೇಯ ಶ* ಪತ್ತೆ: ವಾರಸುದಾರರ ಪತ್ತೆಗೆ ಪೊಲೀಸರ ಮನವಿ
ಶಿವಮೊಗ್ಗ ಜಿಲ್ಲೆ: ಹಣಗೆರೆ ಸಿರಿನಲ್ಲಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಕಾಡಿನಲ್ಲಿ ಅನಾಮಧೇಯ ವ್ಯಕ್ತಿಯ ಮೃ*ದೇಹ ಪತ್ತೆಯಾಗಿದೆ.ಸುಮಾರು ಕೆಲವು ದಿನಗಳ ಹಿಂದೆಯೇ ವ್ಯಕ್ತಿ ಮೃ*ಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಮೃತರು ಸುಮಾರು 55 ವರ್ಷ ವಯಸ್ಸಿನ ಪುರುಷ ಎಂದು ತಿಳಿದುಬಂದಿದೆ.
- ಮೃ* ವ್ಯಕ್ತಿಯ ಗುರುತಿನ ಚಿಹ್ನೆಗಳು
- ವಯಸ್ಸು: ಸುಮಾರು 55 ವರ್ಷ
- ಎತ್ತರ: ಸುಮಾರು 5 ಅಡಿ 6 ಇಂಚು
- ಉಡುಪು: ಬಿಳಿ ಬಣ್ಣದ ಶರ್ಟ್ ಜುಬ್ಬಾ ಹಾಗೂ ಬಿಳಿ ಪಂಚೆ
- ಬಿಳಿ ಬಣ್ಣದ ಟವಲ್
- ತಲೆಯ ಮೇಲೆ ಬೂದು ಬಣ್ಣದ ಟೋಪಿ
- ಕಾಲಿನಲ್ಲಿ ಚಪ್ಪಲಿ
- ಜೇಬಿನಲ್ಲಿ ಎಲೆ-ಅಡಿಕೆ ಕವರ್, ಮಾತ್ರೆಗಳು ಹಾಗೂ ಕನ್ನಡಕ ಪತ್ತೆಯಾಗಿದೆ.
ಪ್ರಸ್ತುತ ಮೃ*ದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ವ್ಯಕ್ತಿಯ ಬಗ್ಗೆ ಮಾಹಿತಿ ಇರುವವರು ಅಥವಾ ಸಂಬಂಧಿಕರು ಕೂಡಲೇ ಮಾಳೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
08181235142 —8277982919


ವಿಮಾ ಕಂಪನಿಯು ತೀರ್ಥಹಳ್ಳಿ ತಾಲೂಕಿಗೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪದ ಜೊತೆಗೆ, ಈ ವಿಚಾರದಲ್ಲಿ ತೋಟಗಾರಿಕೆ ಇಲಾಖೆ ಮಧ್ಯಸ್ಥಿಕೆ ವಹಿಸುತ್ತಿದ್ದರೂ ರೈತರ ಸಮಸ್ಯೆಗೆ ಸಮರ್ಪಕ ಪರಿಹಾರ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.“ಸಮೀಕ್ಷೆ ಮಾಡಿಲ್ಲ, ಮಳೆ ಮಾಪನ ಸರಿಯಾಗಿಲ್ಲ. ಇದೆಲ್ಲವೂ ರೈತರಿಗೆ ಮೋಸ ಮಾಡುವ ಹುನ್ನಾರ ಎಂಬ ಅನುಮಾನ ಮೂಡುತ್ತಿದೆ. ಈ ವಿಚಾರದಲ್ಲಿ ತೋಟಗಾರಿಕೆ ಇಲಾಖೆ ಮಧ್ಯಸ್ಥಿಕೆ ವಹಿಸುತ್ತಿದೆ. ಆದರೆ,ಈಗಾಗಲೇ ತೋಟಗಾರಿಕೆ ಇಲಾಖೆ ಮುಂದೆ ಪ್ರತಿಭಟನೆ ನೀಡಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ ಜೊತೆಗೆ ಯಾರನ್ನು ನಂಬಬೇಕು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಸಮಗ್ರ ವರದಿ ಪಡೆದು, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು” ಎಂದು ಕುಪ್ಪಳ್ಳಿ ಪ್ರಶಾಂತ್ ಮನವಿ ಮಾಡಿದ್ದಾರೆ.