ತೀರ್ಥಹಳ್ಳಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಕಚೇರಿ ಉದ್ಘಾಟನೆ

ತೀರ್ಥಹಳ್ಳಿ: ಪಟ್ಟಣದ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ನವೆಂಬರ್ 08ರಂದು ಸಂಭ್ರಮದಿಂದ ನಡೆಯಿತು.ಮಲೆನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ಅವರು ನೂತನ ಕಚೇರಿಯನ್ನು ಉದ್ಘಾಟಿಸಿ ಸಂಘಟನೆಯ ಪದಾಧಿಕಾರಿಗಳಿಗೆ ಹಾಗೂ ಪತ್ರಕರ್ತರಿಗೆ ಶುಭಾಶಯ ಕೋರಿದರು. ಶಾಸಕ ಆರಗ ಜ್ಞಾನೇಂದ್ರ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡಿದರು.ಇದೇ ಸಂದರ್ಭದಲ್ಲಿ ತೀರ್ಥಹಳ್ಳಿಯ ಹೆಮ್ಮೆಯ ಉದ್ಯಮಿ ಶಫಿ ಅವರನ್ನು ಸಂಘಟನೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.ಜೊತೆಗೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ಭೇಟಿ ನೀಡಿ ಪತ್ರಕರ್ತರ ಸಂಘಕ್ಕೆ ನೂತನ ಕಚೇರಿಗೆ ಶುಭ ಹಾರೈಸಿದರುಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಹಾಗೂ ಸಹ್ಯಾದ್ರಿ ವಾರ್ತೆ ಪತ್ರಿಕೆಯ ಸಂಪಾದಕರಾದ ಗಣಪತಿ, ಸತ್ಯಶೋಧ ನ್ಯೂಸ್‌ನ ಅರುಣ್ ಮಂಜುನಾಥ್, ಸುದ್ದಿ ಸಾರಥಿ ನ್ಯೂಸ್‌ನ ರಾಜೇಶ್ ಮೊಗವೀರ, ಪ್ರತಿಸೂಚಕ ನ್ಯೂಸ್‌ನ ಪ್ರತೀಕ್, ಎಸ್.ಕೆ. ನ್ಯೂಸ್‌ನ ಶ್ರೀಕಾಂತ್ ಹಾಗೂ ಛಲಗಾರ ಪತ್ರಿಕೆಯ ವರದಿಗಾರ ತುಪ್ಪದಮನೆ ಶಿವಣ್ಣ ಸೇರಿದಂತೆ ಪತ್ರಕರ್ತರು ಹಾಗೂ ಕುರುವಳ್ಳಿ ನಾಗರಾಜ್, ಪ್ರಮೋದ್ ಪೂಜಾರಿ ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಹಾಗೂ ಪತ್ರಕರ್ತರಿಗೆ ಸಿಹಿ ಮತ್ತು ಹಣ್ಣುಗಳನ್ನು ನೀಡಿ ಆತ್ಮೀಯವಾಗಿ ಸತ್ಕರಿಸಲಾಯಿತು.ಪತ್ರಕರ್ತರ ಸಂಘಟನೆಯ ಚಟುವಟಿಕೆಗಳಿಗೆ ಸ್ವಂತ ಕಚೇರಿಯ ವ್ಯವಸ್ಥೆಯಾಗಿರುವುದು ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಿದಂತಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

0%
thinking

Thinking

Leave a Reply

Your email address will not be published. Required fields are marked *