ತೀರ್ಥಹಳ್ಳಿ: ಜೆಜೆಎಂ ನಾಮಫಲಕ ಕಾಮಗಾರಿ ಕಳಪೆ ಆರೋಪ!
ತೀರ್ಥಹಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಗುಣಮಟ್ಟದ ಕುರಿತು ಈಗಾಗಲೇ ಹಲವು ಪ್ರಶ್ನೆಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಯೋಜನೆಯ ನಾಮಫಲಕ ಕಾಮಗಾರಿಯ ಕಳಪೆ ಗುಣಮಟ್ಟದ ಕುರಿತು ಆರೋಪಗಳು ಕೇಳಿಬಂದಿವೆ.ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಬೇಕಾದ ಸಂದರ್ಭದಲ್ಲಿ, ನಾಮಫಲಕ ಕಾಮಗಾರಿಯಲ್ಲಿನ ಲೋಪಗಳ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಈ ವಿಚಾರದಲ್ಲಿ ಕಾಣದ ಕೈಗಳ ಪ್ರಭಾವವಿದೆಯೇ? ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ.
oಈ ಸಂಬಂಧ ಮುಳುಬಾಗಿಲು ಗ್ರಾಂ ಪಂ ಮಾಜಿ ಸದಸ್ಯರು ಹಾಗೂ ಸಮಾಜ ಸೇವಕರಾದ ಡಾ. ಮಂಜುನಾಥ್ ಶೆಟ್ಟಿ ಅವರು ದಾಖಲೆ ಸಹಿತ ವಿಚಾರಗಳನ್ನು ಮುಂದಿಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಕಾಮಗಾರಿಯ ಗುಣಮಟ್ಟ, ವೆಚ್ಚ, ಅನುಷ್ಠಾನದ ವಿಧಾನ ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರ ಜವಾಬ್ದಾರಿಯ ಕುರಿತು ದಾಖಲೆಗಳ ಆಧಾರದಲ್ಲಿ ಮಾಹಿತಿ ಬಹಿರಂಗಪಡಿಸುವ ಸಾಧ್ಯತೆಯಿದೆ.
ಸರ್ಕಾರದ ಅನುದಾನದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದು ಮತ್ತು ಸಾರ್ವಜನಿಕ ಹಣದ ಸದ್ಬಳಕೆ ಖಚಿತಪಡಿಸುವುದು ಸಂಬಂಧಪಟ್ಟ ಇಲಾಖೆಗಳ ಕರ್ತವ್ಯವಾಗಿದೆ. ನಾಮಫಲಕ ಕಾಮಗಾರಿಯಲ್ಲಿ ನಿಜವಾಗಿಯೂ ಲೋಪಗಳಿವೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸ್ಪಷ್ಟನೆ ನೀಡಬೇಕಿದೆ.
ಆಗುಂಬೆ ಗ್ರಾಮ ಠಾಣಾ ಜಾಗದ ಒತ್ತುವರಿ ತೆರವು ಕಾರ್ಯಾಚರಣೆ
ತೀರ್ಥಹಳ್ಳಿ: ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಠಾಣಾ ಜಾಗದ ಒತ್ತುವರಿ ತೆರವು ಕಾರ್ಯಾಚರಣೆಶುರುವಾಗಿದ್ದು
ಗ್ರಾಮ ಪಂಚಾಯಿತಿಯ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಸುಧೀಂದ್ರ ಮಲ್ಯ ಅವರಿಗೆ ಸಂಬಂಧಿಸಿದ ಒತ್ತುವರಿ ಎಂದು ಗುರುತಿಸಲಾದ ಜಾಗವನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಯಿತು
.
ಕಾರ್ಯಾಚರಣೆಯಲ್ಲಿ ಮೆಸ್ಕಾಂ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯದೊಂದಿಗೆ ತೆರವು ಕಾರ್ಯಾಚರಣೆ ಶುರವಾಗಿದ್ದು ಇದೀಗ ಸುಂದಿಂದ್ರ ಮಲ್ಯರಿಗೆ ತೆರವುಗೊಳಿಸಲು ನವೆಂಬರ್ 7 ನೆ ತಾರೀಕಿನ ತನಕ ಗಡವು ನೀಡಿದ್ದು, ತವಾಗಿಯೇ ಖುಲ್ಲ ಮಾಡದಿದ್ದಲ್ಲಿ ಇಲಾಖೆ ವತಿಯಿಂದ ತೆರವು ಗೊಳಿಸಲು ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೇಗರವಳ್ಳಿಯಲ್ಲಿ ಅ.31ರಂದು ಹೋಬಳಿ ಮಟ್ಟದ ಪ್ರಜಾ ಸೇವಾ ಅಭಿಯಾನ
ತೀರ್ಥಹಳ್ಳಿ: ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ವತಿಯಿಂದ ಹೋಬಳಿ ಮಟ್ಟದ ಪ್ರಜಾ ಸೇವಾ ಅಭಿಯಾನವನ್ನು ಅಕ್ಟೋಬರ್ 31ರ ಶನಿವಾರ ಮೇಗರವಳ್ಳಿಯಲ್ಲಿ ಆಯೋಜಿಸಲಾಗಿದೆ.ಮೇಗರವಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಅಭಿಯಾನ ನಡೆಯಲಿದ್ದು, ಗ್ರಾಮ ಪಂಚಾಯಿತಿ ಮೇಗರವಳ್ಳಿ ವತಿಯಿಂದ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ.
ಅಭಿಯಾನದಡಿ ಸಾರ್ವಜನಿಕರಿಗೆ ವಿವಿಧ ಸರ್ಕಾರಿ ಸೇವೆಗಳ ಮಾಹಿತಿ ನೀಡುವುದು, ಅರ್ಜಿಗಳನ್ನು ಸ್ವೀಕರಿಸಿ ಪರಿಹಾರ ಕಲ್ಪಿಸುವುದು, ಸರ್ಕಾರದ ವಿವಿಧ ಸೌಲಭ್ಯಗಳನ್ನು ವಿತರಿಸುವುದು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಸಲಹೆ ನೀಡುವ ಕಾರ್ಯಗಳು ನಡೆಯಲಿವೆ.“ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಎಂಬ ಆಶಯದೊಂದಿಗೆ ಆಯೋಜಿಸಿರುವ ಈ ಅಭಿಯಾನದ ಪ್ರಯೋಜನವನ್ನು ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಪಡೆದುಕೊಳ್ಳುವಂತೆ ಗ್ರಾಮ ಪಂಚಾಯಿತಿ ಮೇಗರವಳ್ಳಿ ತಿಳಿಸಿದೆ.

– ದಿನಾಂಕ: ಅಕ್ಟೋಬರ್ 31, ಶನಿವಾರ
ಸಮಯ: ಬೆಳಿಗ್ಗೆ 10 ಗಂಟೆ
ಸ್ಥಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನ, ಮೇಗರವಳ್ಳಿ
ತೀರ್ಥಹಳ್ಳಿ: ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಉಚಿತವಾಗಿ ಎ ಎಂ ಸಿ ವಿತರಣೆ.!
ತೀರ್ಥಹಳ್ಳಿ: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ 2026-27ನೇ ಸಾಲಿನ ಎಲೆಚುಕ್ಕೆ ರೋಗ ನಿಯಂತ್ರಣ ಕಾರ್ಯಕ್ರಮದಡಿ ಅಡಿಕೆ ಬೆಳೆಗಾರರಿಗೆ ಅರ್ಕಾ ಮೈಕ್ರೋಬಿಯಲ್ ಕಂನ್ಸಾರ್ಷಿಯಂ (AMC) ಎಂಬ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಉಚಿತವಾಗಿ ವಿತರಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಮಾರ್ಗಸೂಚಿಯನ್ವಯ ಪ್ರತಿ ಎಕರೆ ಅಡಿಕೆ ಕ್ಷೇತ್ರಕ್ಕೆ ಗರಿಷ್ಠ ₹600 ಮೌಲ್ಯದ AMC ನೀಡಲಾಗುತ್ತದೆ. ಪ್ರತಿ ಫಲಾನುಭವಿಗೆ ಗರಿಷ್ಠ 5 ಎಕರೆ ಅಡಿಕೆ ಕ್ಷೇತ್ರಕ್ಕೆ, ಅಂದರೆ ಒಟ್ಟು ₹3,000 ಮೌಲ್ಯದವರೆಗೆ ಉಚಿತವಾಗಿ ಪಡೆಯಲು ಅವಕಾಶವಿದೆ.
ನ.13ರೊಳಗೆ ಅರ್ಜಿ ಸಲ್ಲಿಸಿ
AMC ಪಡೆಯಲು ಇಚ್ಛಿಸುವ ರೈತರು ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 13, 2026ರೊಳಗೆ ತೀರ್ಥಹಳ್ಳಿ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಜೇಷ್ಠತೆಯ ಆಧಾರದಲ್ಲಿ ಹಾಗೂ ವರ್ಗವಾರು ಲಭ್ಯವಿರುವ ಪ್ರಮಾಣಕ್ಕೆ ಅನುಗುಣವಾಗಿ ರೈತರಿಗೆ AMC ವಿತರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು
ನಿಗದಿತ ಅರ್ಜಿ ನಮೂನೆ.
01-04-2026ರ ನಂತರದ RTC (ಪಹಣಿ). ಇದರಲ್ಲಿ ಅಡಿಕೆ ಬೆಳೆ ನಮೂದಾಗಿರಬೇಕು. ಬೆಳೆ ನಮೂದಾಗದಿದ್ದಲ್ಲಿ ಕಂದಾಯ ಇಲಾಖೆಯಿಂದ ಬೆಳೆ ದೃಢೀಕರಣ ಪತ್ರ ಪಡೆಯಬೇಕು.
ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿ.
ಬ್ಯಾಂಕ್ ಪಾಸ್ಬುಕ್ನ ಮುಖಪುಟದ ಜೆರಾಕ್ಸ್ ಪ್ರತಿ.
RTC ಜಂಟಿ ಖಾತೆಯಾಗಿದ್ದಲ್ಲಿ ₹100ರ ಬಾಂಡ್ ಪೇಪರ್ನಲ್ಲಿ ಒಪ್ಪಿಗೆ ಪತ್ರ ಸಲ್ಲಿಸಬೇಕು. ಇದಕ್ಕೆ ನೋಟರಿ ಕಡ್ಡಾಯ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು RD ಸಂಖ್ಯೆಯಿರುವ ಜಾತಿ ಪ್ರಮಾಣಪತ್ರದ ಜೆರಾಕ್ಸ್ ಪ್ರತಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
AMC ವಿತರಣೆ ಹಾಗೂ ಅರ್ಜಿ ಸಲ್ಲಿಕೆ ಕುರಿತು ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಕುಶಾವತಿ, ತೀರ್ಥಹಳ್ಳಿ ಅಥವಾ ಸಂಬಂಧಿಸಿದ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಹೋಬಳಿ
ಅಧಿಕಾರಿ ಹೆಸರು
ದೂರವಾಣಿ ಸಂಖ್ಯೆ
ಕಸಬಾ
ದಿನೇಶ್ ಟಿ.ಕೆ.
9448751947
ಆಗುಂಬೆ
ಲಕ್ಷ್ಮೀಕಾಂತ್ ಕೆ.ಎಚ್.
9482960857
ಅಗ್ರಹಾರ
ಲಕ್ಷ್ಮೀಕಾಂತ್ ಕೆ.ಎಚ್.
9482960857
ಮಂಡಗದ್ದೆ
ಮಧುಕರ ಕೆ.ಎಲ್.
8296510018
ಮುತ್ತೂರು
ಕಾವ್ಯ ಜಿ.
8277160164
ತೀರ್ಥಹಳ್ಳಿ ತಾಲ್ಲೂಕು
ಸೋಮಶೇಖರ ಕೆ.
9108280642
- ಅಡಿಕೆ ಬೆಳೆಗಾರರು ಈ ಯೋಜನೆಯ ಸದುಪಯೋಗ ಪಡೆದುಕೊಂಡು, ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಕೋರಿದೆ.
