ಉತ್ತರಾಖಂಡ್ ಹೆಲಿಕಾಪ್ಟರ್ ದುರಂತ: ಐವರು ಕನ್ನಡಿಗರ ದುರ್ಮರಣ!
ಬೆಂಗಳೂರು: ಉತ್ತರಾಖಂಡ್ನಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಐವರು ಕನ್ನಡಿಗರು ಸೇರಿದಂತೆ ಆರು ಮಂದಿ ದಾರುಣವಾಗಿ ಮೃ*ತಪಟ್ಟಿದ್ದಾರೆ. ಪ್ರವಾಸಕ್ಕೆಂದು ತೆರಳಿದ್ದ ಬೆಂಗಳೂರಿನ ಐವರು ಸ್ನೇಹಿತರು ಹೆಲಿಕಾಪ್ಟರ್ ಪತನದಲ್ಲಿ ಜೀ* ಕಳೆದುಕೊಂಡಿರುವ ಘಟನೆ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ.
ಉತ್ತರಾಖಂಡ್ನ ಜೋಶಿಮಠ ಸಮೀಪ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಬೆಂಗಳೂರು ಮೂಲದ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಲಂಕೆ, ವಕೀಲರಾದ ಶಂಕರೇಗೌಡ, ಸುಧೀರ್ ಕೆ., ಹೆಚ್.ಎಸ್. ನಾಗರಾಜ್ ಪ್ರತಾಪ್ ಹಾಗೂ ಹೆಲಿಕಾಪ್ಟರ್ ಕ್ಯಾಪ್ಟನ್ ಹಿಮಾಂಶು ಎಂದು ಗುರುತಿಸಲಾಗಿದೆ.ಕೇದಾರನಾಥ ಹಾಗೂ ಬದ್ರಿನಾಥ ದೇವಸ್ಥಾನಗಳ ದರ್ಶನಕ್ಕಾಗಿ ಸ್ನೇಹಿತರು ಪ್ರವಾಸ ಕೈಗೊಂಡಿದ್ದರು. ಆದರೆ, ವಿಧಿಯಾಟಕ್ಕೆ ಪ್ರವಾಸದ ಸಂಭ್ರಮ ದುರಂತದಲ್ಲಿ ಅಂತ್ಯಗೊಂಡಿದೆ. ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಐವರು ಸ್ನೇಹಿತರು ಸೇರಿದಂತೆ ಆರು ಮಂದಿ ಮೃ*ತಪಟ್ಟಿದ್ದಾರೆ ಎಂದು ವರದಿಯಾಗಿದೆ.ದುರ್ಘಟನೆಯ ಬಳಿಕ ಉತ್ತರಾಖಂಡ್ ಪೊಲೀಸರು ಮೃತರ ಗುರುತು ಪತ್ತೆಹಚ್ಚಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
